Monday, December 8, 2008

ಎಲ್ಲಿರುವೆ? ಮಾನವ ಕಾಡುವ ರೂಪಸಿಯೇ ?

ಮಳೆ ಹನಿಗಳು
ಕೂಗುತಿವೆ ಇಂಪಾದ ದನಿಗಳು
ಅವಳ ತಾಳ್ಮೆಯ ಕಣ್ಣುಗಳು
ಕಾಣಲು ಕಾತುರ.. ಮತ್ತೆ ಮತ್ತೆ ಕಾಡುತಿವೆ
ಅವಳು ನಕ್ಕು ನುಡಿದ
ಒಲುಮೆಯ ಮಾತುಗಳು.

ಏನ್ ರೀ? ಅಂತಿರಾ? ಏನು ಇಲ್ಲ ಸ್ವಾಮಿ,
ಒಂದಷ್ಟು ಹಳೆಯ ನೆನಪುಗಳು ಮಳೆಯ ಹನಿಗಳ ಜೊತೆ
ಹೃದಯದಲ್ಲಿ ತುಂತುರು ನಾದ ಮಾಡಿ ಹೋಗುತ್ತಿವೆ..
ಏನೋ ಬೇಸರ, ಕಾಣಲು ಅವಳ, ಕಾತುರ..
ಅಷ್ಟೆ ..

ಮತ್ತೆ ಬಾಳು ಅವರ ಹಾದು ನೆನಪಿಗೆ ಬರುತ್ತೆ

" ಎಲ್ಲಿರುವೆ? ಮಾನವ ಕಾಡುವ ರೂಪಸಿಯೇ ? .."

Wednesday, August 6, 2008

ಹೀಗಿವೆ ಡುಮ್ಮನ ದಿನಗಳು...

ಮತ್ತೇನ್ ಶಿವಾ ಹೊಸ ಸುದ್ದಿ ಅಂತ ಕೇಳ್ತಿರಾ?

ಏನು ಇಲ್ಲ ಗುರುಗಳೇ.. ಅದೇ ಹಳೆ ಕಥೆ patient ಗೆ ಅದೇ ಹೆಂಡತಿ ಮಾತ್ರ ಕಾಣಿಸುತ್ತಿಲ್ಲ , ಪಕ್ಕದ ಮನೆಅವ್ರ್ಣ ನೋಡಿದ್ರೆ ಕಣ್ಣು ಕೆಂಪಾಗಾತು, ಈರುಳ್ಳಿ ಹೆಚ್ಚಿದರೆ ಕಣ್ಣೀರ್ ಜಾಸ್ತಿ ಬರತ್ತೆ .. ಮಕ್ಕಳ ತಲೆ ನೋವು..ಹುಡುಗಿಗೆ sight ಹೊಡಿಯುವಾಗ ಕಣ್ಣಲ್ಲಿ ಕಲ್ಲು ಬಿತ್ತು..

ಮತ್ತೆ ಅವಾಗ ಅವಾಗ campಗೆ ಹಾಕ್ತಾರೆ.. ಸುಪರಾಗಿರತ್ತೆ.. ಫಿಲ್ಟರ್ ಕಾಫಿ .. ಇಡ್ಲಿ ದೋಸೆ ವಡೆ ಎಲ್ಲ free camp ನಡೆಸೋರ್ ಖರ್ಚು.. ಒಂದ್ ತರ ಮಜಾನೆ ಅ೦ಕೊಳಿ.

ಜಾಸ್ತಿ ಜಾಸ್ತಿ ಕೇಸು ಬರ್ತವೆ.. ಹೊಸ ಹೊಸ ಪಾಠ ಕಲಿತಿವಿ.

ಊಟ, ಪಾಠ, ಬೆಳಗ್ಗೆ ಓಟ ಒಂದ್ ತರಾ ಚನಾಗಿದೆ.
ದಿನಾ ಸಾಯಂಕಾಲ 5-6 ಕ್ಲಾಸ್ ಇರತ್ತೆ ಹೇಳಿದೆಲ್ಲ ತಲೆ ಮೇಲೆ ಹಾರಿ ಹೋಗತ್ತೆ. ರೂಮ್ನಲ್ಲಿ ರಾತ್ರಿ ಪುಸ್ತಕ ತಗೆದು ಓದಿದ್ರೆನೆ ಅರ್ಥ ಆಗೋದು. ಬೆಪ್ಪು ತಕಡಿ ಸಲ್ಪ ಅದಕ್ಕೆ.
ಹಾಸ್ಟಲ್ನಲ್ಲಿ ಹಾಡ ಕೀಳ್ತೀನಿ sunday ನಿದ್ದೆ ಹೊಡಿತೀನಿ.
internet ಇಲ್ಲ ಅನ್ನೋದ್ ಬಿಟ್ರೆ ಬೇರೆ ಎಲ್ಲ ಸೂಪರ್.

ಕೃಷ್ಣ ದಾಸ್ ಅಂತ ಒಬ್ರು ಟೀಚರ್ ಇದಾರೆ . ಬಹಳ ಒಳ್ಳೆಯವರು.. ಯಾವಾಗಲು ನಗ್ತಾರೆ
ಸೂಪರಾಗಿ ಪಾಠ ಮಾಡ್ತಾರೆ. ಇದ್ರೆ ಅವ್ರ ಹಂಗೆ ಇರ್ಬೇಕು ಅನ್ನಿಸುತ್ತೆ ..
ಇವತ್ತು ಸಿಕ್ಕಿದರು ಏನೋ doubt ಕೀಳದೆ ಪಟ ಪಟ ಅಂತ ಉತ್ತರ ಹೇಳಿದ್ರು.
ಅದು ಏನು ತಲೆನೋ info ಮಹಾಸಾಗರನೋ ಅರ್ಥವೇ ಆಗಲ್ಲ.

ಓದಾಕೆ ಹೊತ್ತ ಆಯಿತು ಬರ್ತೀನಿ ..

ಮತ್ತೆ ಸಿಗಣ..

Saturday, May 31, 2008

ಕಾಣದ೦ತೆ ಮಾಯವಾದನೋ ನಮ್ಮ ಶಿವ ಕೈಲಾಸ ಸೇರಿಕೊ೦ಡನೊ...

ಯಾಕ್ರೀ? ಎಲ್ಲಿಗ್ ಹೋದ ಡುಮ್ಮ ಅಂತ ಯೋಚಿಸ್ತಿದಿರಾ?
ಏಪ್ರಿಲ್ 29 ನೆ ತಾರಿಕಿನಿ೦ದ ಮದುರೈನಲ್ಲಿರೋ : ಅರವಿಂದ್ ಕಣ್ಣಿನ ಆಸ್ಪತ್ರೆ ಅಲ್ಲಿ ಮುಂದಿನ ವಿದ್ಯಾಭ್ಯಾಸಕ್ಕೆ ಸೇರಿಕೊ೦ಡಿದಿನಿ.
ಚಿಕ್ಕ ಊರು , ಹೊಸ ಭಾಷೆ, ಅಂತ ಏನು ತಲೆ ಕೆಡಿಸಿಕೊಲ್ಲೋ ಹಾಗೆ ಇಲ್ಲ
hospital ನಲ್ಲಿ ಬೆನ್ನು ಮುರಿಯೋ ಅಷ್ಟು ಕೆಲ್ಸ, ಆನೆ ಭಾರದಷ್ಟು ಓದೋಕೆ ಇದೆ, ಊಟಕ್ಕೆ ಅನ್ನ ಪುಲ್ಚಾರು ಕೆಲಸದ ವೇಳೆ ಬೆಳಗ್ಗೆ 0730 ಇಂದ 1800 ತನಕ. ಅಧ್ಯಾಪಕರು ಚೆನ್ನಾಗಿದಾರೆ ,ಪಾಠ ಸೂಪರಾಗಿ ಮಾಡ್ತಾರೆ. ರೂಮು ನಾಲಕ್ನೆ ಮಹಡಿನಲ್ಲಿದೆ. ಊರೆಲ್ಲ ಕಾಣಿಸುತ್ತೆ.
ಇಲ್ಲೇ ಎಲ್ಲ ಸೌಕರ್ಯಗಲಿದಾವೆ. ಎಲ್ಲ ಓದಿದ್ ಮುಗ್ಸೋ ಅಷ್ಟರಲ್ಲಿ ಇನ್ನು ಆರು ವರ್ಷಗಳಗಬಹುದು.
ಅಲ್ಲಿ ತನಕ ಈ ದುಮ್ಮಾನ blog ಓದಿ enjoy ಮಾಡಿ..........

Saturday, April 12, 2008

BREAKING NEWS!!!!!!!!!!!!!!!!!!!!!!!!!

ಸ್ಕೂಲಿನಲ್ಲಿ ನಮಗೆ ವ್ಯಾಕರಣವನ್ನು ಪಾಠ ಮಾಡುವಾಗ ಅಧ್ಯಾಪಕರು ವಾರ್ತೆಗಳನ್ನು ನೋಡಿ ಬಹಳ ಸ್ವಚ್ಹ ಉಚ್ಚಾರಣೆ ಮತ್ತೆ ಉತ್ಕೃಷ್ಟವಾದ ವ್ಯಾಕರಣ ಕಲಿಯಬಹುದು ಎಂದು ಹೇಳ್ಳುತ್ತಿದರು.

ಮೊನ್ನೆ ಯಾವುದೊ ಖಾಸಗಿ ಚಾನಲ್ ನ್ಯೂಸ್ ನೋದುತಿದ್ದೆ..
ಅಲ್ಲಿ ವರದಿಯಾಗುತ್ತಿದ ವಾರ್ತೆಗಳು ನನಗೆ ನಮ್ಮ ಅಧ್ಯಾಪಕರು ಹೇಳಿದ್ದ ಆ ಮಾತುಗಳು ಎಷ್ಟು ಹುಸಿಯಾಗಿವೆ ಇಂದು ಎನಿಸಿತು..

ಒಂದು ಉದಾಹರಣೆ ಕೊಡುತ್ತೇನೆ ( ಇದು ಯಾವುದೇ ನಿಜ ವ್ಯಕ್ತಿ/ ಘಟನೆಗೆ ಸಂಬಂದಿಸಿದಲ್ಲ )
ಬ್ರೇಕಿಂಗ್ ನ್ಯೂಸ್:: ಹಾರೋಹಳ್ಳಿ ತಾಂಡ , ಬಿಜಾಪುರ್ : ಒಂದು ಆಟೋ ರಿಕ್ಷಾ ಒಂದು ಸೈಕಲ್ ಸವಾರನಿಗೆ ಡಿಕ್ಕಿ ಹೊಡೆದ ಕಾರಣ ಅವನು ಗಟರಿನಲ್ಲಿ ಬಿದ್ದನು.. ಯಾವುದೇ ಆಸ್ತಿ ಪಾಸ್ತಿಗೆ ಹಾನಿಯಾಗದಿದ್ದರು .. ಗಟರಿನಲ್ಲಿ ಮಲಗಿದ್ದ ನಾಯಿಮರಿಯ ಒಂದು ಕಾಲು ಮುರಿದಿದೆ ..

ಮತ್ತಷ್ಟು ಬಿಸಿ ಸುದ್ದಿ ಬ್ರೇಕ್ ನ ನಂತರ
follow up
live call from harohalli

ಮಹೇಶ reporting: ಈಗ ಇಲ್ಲಿ ಸ್ಥಿತಿ ಚಿಂತಾಜನಕವಾಗಿದೆ . PeTA ಕಾರ್ಯಕರ್ತರು auto ಚಾಲಕರು ಮತ್ತೆ ಸೈಕಲ್ ಸವಾರರ ಮೇಲೆ ಹಲ್ಲೆ ನಡೆಸಿ ಒಂದು ಸೈಕಲ್ ಹಾಗು ಒಂದು ಆಟೋ tyre puncture ಮಾಡಿದ್ದರೆ . ಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಪೋಲೀಸರು Rs 500 ಲಂಚ ಕೆಳುತಿದ್ದರೆ .
ಇದ್ದರಿಂದ ಊರಿನ ಜನತೆಗೆ ಬಹಳ ನೋವು ಉಂಟಾಗಿ ನಾಳೆ ಹಾರೋಹಳ್ಳಿ ಬಂಧ ಘೋಷಿಸಿ , ರಾಜ್ಯಪಾಲರ ಮನೆ ಘೇರಾವ್ ಮಾಡಲಿದ್ದಾರೆ
over to ಸ್ಟುಡಿಯೋ...

(ಯಾವುದೇ ಖಾಸಗಿ ಅಥವ ಸರ್ಕಾರಿ ಸಂಘಟನೆಗೆ ನಾನು ದಕ್ಕೆ ತರುವ ಉದ್ದೇಶದಿಂದ ಇದನ್ನು ಬರೆದಿಲ್ಲ.. ದಯವಿಟ್ಟು ಹಾಸ್ಯಗಾರನ ಒಂದು ಪ್ರಾಮಾಣಿಕ ಪ್ರಯತ್ನ ಎಂದು ಹೊಟ್ಟೆಗೆ ಹಾಕೊಳ್ಳಿ ..

ಅಯ್ಯೋ ಇಲ್ಲ ಅಂದ್ರೆ ಬಿಡಿ ,, ನಂದೇನು ಹೋಗತ್ತೆ ಕತ್ತೆ ಬಾಲ? ನನ್ನ ಖುದ್ದಾಗಿ ಸಿಕ್ಕಾಗ ಒಂದೆರಡ್ ಮಾತು ಅಂದಿ ತೀರಸ್ಕೊಳ್ಳಿ ok ನಾ ? )

Tuesday, April 8, 2008

ಕೇಳದೇ ನಿಮಗೀಗ ದೂರದಲ್ಲಿ ಯಾರೋ ?........

ಎಷ್ಟು ಸತಿ ಈ ಹಾಡು ಕೇಳಿದರು ಹೃದಯದಲ್ಲಿ ಏನೋ ಗೊಂದಲ, ಏನೋ ಆಸೆ, ಉಕ್ಕಿ ಹರಿಯುವಂತೆ..
ಜೀವನದಿ ನಡಿಯುತ್ತ ಇಲ್ಲಿಯ ವರೆಗೆ ಸಾಗುತ್ತ ಬಂದಿದೆ ಒಂಟಿ ಸವಾರಿ. ಹೇಳಬೇಕಂದರೆ ನೂರು ನೂರು ಸಂಷಯಗಳು. ಈ ಸುಂದರ ಮೈತ್ರಿಯ ಕಳೆದುಕೊಳ್ಳುವ ಹೆದರಿಕೆ. ಸಮಯ ಸಂಧರ್ಬ ದ ಸುಳಿಯಲ್ಲಿ ಸಿಲುಕಿ ಒಂದು ಪುಟ್ಟ ಮಲ್ಲಿಗೆ ಹೂವು ಬಾಡುವಂತಿದೆ.

ಹೃದಯದಲ್ಲಿ ಒಂದು ಹಾಡು ಮೂಡಿ.
ನಿನ್ನ ಕರವ ಪಿಡಿಯಲು ಬೇಡಿ.

ಕೇಳಲು ಹೆದರುವೇನು ನಿನ್ನನ್ನು
ಮಲ್ಲಿಗೆಯೇ,
ನೋಡು ನಿನ್ನ ಮೈತ್ರಿಯ ಮೋಡಿ .

ಹೇಗೆ ಹೇಳಲಿ ಮನಸ ಮಾತನ್ನು ?
ಪದ್ಯ-ಗದ್ಯಗಲೆಲ್ಲವು ಸುಳ್ಳೇ ಸರಿ
ಕೇಳುವೆಯಾ ಕಿವಿಗೊಟ್ಟು
ಹೃದಯ ಮೀಟುವ ಈ ಪರಿ?

ಮತ್ತೆ ಬಾ ಕನಸಲ್ಲಿ ಇಂದು
ಕಾಣಲು ಕಾತುರ, ನಿನ್ನ
ಎನ್ನ ಜೀವನದ
ಕೇಂದ್ರ ಬಿಂದು..

ಕಾದಿರುವೆ ನಿನಗೊಸ್ಕರ ಪೂರ್ಣಿಮೆಯಂದು.

Friday, March 14, 2008

ಒಂದು ಸೂಚನೆ

ಪ್ರಿಯರೇ,

ನಮಸ್ಕಾರ. ಹೇಗಿದ್ದೀರಿ?

ನಾವೆಲ್ಲ ಎಷ್ಟೋ ಕಾಲದಿಂದ ಅಂತರ್ಜಾಲದಲ್ಲಿ ಬರೀತಿದೀವಿ, ಓದ್ತಿದೀವಿ, ಪ್ರತಿಕ್ರಿಯಿಸಿಕೊಳ್ತಿದೀವಿ, ಮೇಲ್-ಸ್ಕ್ರಾಪ್-ಚಾಟ್ ಮಾಡ್ಕೊಳ್ತಿದೀವಿ.. ಆದ್ರೆ ನಮ್ಮಲ್ಲಿ ಬಹಳಷ್ಟು ಜನ ಪರಸ್ಪರ ಪರಿಚಯ ಮಾಡಿಕೊಂಡಿಲ್ಲ, ಮುಖತಃ ಭೇಟಿ ಆಗಿಲ್ಲ. ಇರಾದೆ ಇದ್ರೂ ಅದು ಸಾಧ್ಯ ಆಗಿಲ್ಲ!

ಇಂತಿದ್ದಾಗ, ನವ ಪ್ರಕಾಶನ ಸಂಸ್ಥೆ 'ಪ್ರಣತಿ', ಅಂತರ್ಜಾಲದಲ್ಲಿ ಕನ್ನಡ ಬಳಸುವ ಮತ್ತು ಓದುವ ಎಲ್ಲರನ್ನು ಒಂದೆಡೆ ಸೇರಿಸುವ ಈ ಕಾರ್ಯಕ್ಕೆ ಮುಂದಾಗಿದೆ. ನಾಡಿದ್ದು ಭಾನುವಾರ ನಾವೆಲ್ಲ ಪರಸ್ಪರ ಭೇಟಿಯಾಗುವ ಅವಕಾಶ ಒದಗಿ ಬಂದಿದೆ.

ಡೇಟು: ೧೬ ಮಾರ್ಚ್ ೨೦೦೮
ಟೈಮು: ಇಳಿಸಂಜೆ ನಾಲ್ಕು
ಪ್ಲೇಸು: ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್‌, ಬಸವನಗುಡಿ, ಬೆಂಗಳೂರು

ಆವತ್ತು ನಮ್ಮೊಂದಿಗೆ, ಕನ್ನಡದ ಮೊದಲ ಅಂತರ್ಜಾಲ ತಾಣದ ರೂವಾರಿ ಡಾ| ಯು.ಬಿ. ಪವನಜ, 'ದಟ್ಸ್ ಕನ್ನಡ'ದ ಸಂಪಾದಕ ಎಸ್.ಕೆ. ಶ್ಯಾಮಸುಂದರ್, 'ಸಂಪದ'ದ ಹರಿಪ್ರಸಾದ್ ನಾಡಿಗ್, 'ಕೆಂಡಸಂಪಿಗೆ'ಯ ಅಬ್ದುಲ್ ರಶೀದ್ ಸಹ ಇರ್ತಾರೆ, ಮಾತಾಡ್ತಾರೆ.

ಎಲ್ಲರೊಂದಿಗೆ ಒಂದು ಸಂಜೆ ಕಳೆಯುವ ಖುಶಿಗೆ ನೀವೂ ಪಾಲುದಾರರಾಗಿ ಅಂತ, 'ಪ್ರಣತಿ'ಯ ಪರವಾಗಿ ಪ್ರೀತಿಯಿಂದ ಆಹ್ವಾನಿಸುತ್ತಿದ್ದೇನೆ. ಈ ಕಾರ್ಯಕ್ರಮದ ಬಗ್ಗೆ ನಿಮ್ಮ ಸ್ನೇಹಿತರಿಗೂ ತಿಳಿಸಿ. ಅವರನ್ನೂ ಕರೆದುಕೊಂಡು ಬನ್ನಿ.

ಅಲ್ಲಿ ಸಿಗೋಣ,
ಇಂತಿ,

ಸುಶ್ರುತ ದೊಡ್ಡೇರಿ

----------------
Now playing: MAHISHASURAMARDHINI

Tuesday, February 26, 2008

ಹುಸಿ ಮುನಿಸೆ,ನಿಜ ಮುನಿಸೆ?

ಹುಸಿ ಮುನಿಸೆ,ನಿಜ ಮುನಿಸೆ?

ಕೋಪಿಸಿಕೊಂಡ ಹೆಂಡತಿಯನ್ನು ರಮಿಸುವ ಪತಿಯ ಮಾತುಗಳಿವು.... :)


ಹುಸಿ ಮುನಿಸೆ,ನಿಜ ಮುನಿಸೆ?
ತರವಲ್ಲ ಬಿಡು ಗೆಳತಿ...
ನನ್ನ ದೂರ ತಾಳ್ಳೊ ಮನಸೇ...
ನಗೆ ತೊರೆದ ನಿನ್ನ ಮೊಗದಿ

ಚಂದಿರ ಬಂದಾಯ್ತು, ತೆಂಗಿನ ಮೇಲೆ
ಸರಸರನೆ ತೊಡಿಸೆ ತೋಳಿನ ಮಾಲೆ...
ಎದೆ ಬಡಿತ ಹೆಚ್ಚಾಯ್ತು,ಸೊಕಲು ನಿನ್ನ ಜುಮುಕಿ,
ಎಳೆಎಳೆಯಾಯ್ತು ಮನಸಿನಾ ಗಮಕಿ

ಈ ಮೌನವ ಇಂದಿಲ್ಲೆ ಮುಗಿಸೇ,
ಹಾಡೊಂದು ಮೊಳಗಿದೆ ಈ ಮನದಿ


ಕೆಂಪಾದ ತುಟಿಯಲ್ಲಿ,ವೀಳ್ಯ ಕೆಂಪು
ದುರ್ಗಿಯ ಕ್ಷಣ ಮರೆತು, ತಾರೆಯ ತಂಪು
ಹೊದಿಸಲೆ ನಿಂಗೆ ಪ್ರೀತಿಯ ಚಾದರ
ಎಣಿಸಿ ಪೋಣಿಸಲೇ ಮುತ್ತು ಸಾವಿರ

ಮಲ್ಲೇ ಹೂವ ನೀ ಮುಡಿಸೆ,
ಮುತ್ತಿಟ್ತ ನಿನ್ನ ಮುಡಿಗೆ

Tuesday, February 19, 2008

ಹಾರುತ ಹುಡುಕುತ ಗೂಡನು ನಾನು.....

ಎಲ್ಲಿ ಮಂಗ ಮಾಯ ಆಯ್ತು ಮಂಗ ಅಂದುಕೊಂಡರ??!!
ಏನು ಇಲ್ಲ ಸ್ವಾಮಿ, ಈ ಸೀಟ್ ಹುಡುಕೋ ಜ೦ಜಾಟದಲ್ಲಿ ಇದೀನಿ.

ಒಳ್ಳೆ ಕಡೆ ಸೀಟಗೆ ಏನೇನೋ ಸರ್ಕಸ್ ಮಾಡಬೇಕಂತೆ..
ಕೈನಲ್ಲಾಗೊ ಪ್ರಯತ್ನ ನಡಿಸಿದ್ದಿನಿ, ಉಳ್ದಿದೆಲ್ಲ ಮೇಲೆ ಕುಂತವ್ನಲ್ಲ ಅನ್ಕಲ್ , ಅವನ ಮೇಲೆ ಭಾರ..

ಜೀವ ಉಳ್ಸೊ ವೈದ್ಯರಿಗೂ ಇದೆಲ್ಲ ಹಾಳು ಪರೀಕ್ಷೆಗಳು ಯಾಕೆ ಬೇಕೋ ಅರ್ಥ ಆಗದು.
ನಮಗೆ ಇಷ್ಟ ಇರೋ ಒಂದ್ ವಿಷಯ ಓದೋಕೆ ಬಿಡಬೇಕಪ್ಪ.

ಬಡವನ ಕೋಪ ದವಡೆಗೆ ಮೂಲ ಅನ್ನೊ ಹಂಗೆ ಯಾರ್ ಕೇಳ್ತಾರೆ ಸ್ವಾಮಿ ನಾವು ಹೇಳೋದನ್ನ?

ನನ್ ಕಥೆ ಬಿಡಿ, ನೆವೆಲ್ಲ ಹೆಂಗಿದಿರ ಅಂತ ತಿಳಿಸೆ ಇಲ್ವಲ್ಲ?
ಜಲ್ದಿ ಉತ್ತರ ಬರಿಯಿರಿ.