Saturday, April 12, 2008

BREAKING NEWS!!!!!!!!!!!!!!!!!!!!!!!!!

ಸ್ಕೂಲಿನಲ್ಲಿ ನಮಗೆ ವ್ಯಾಕರಣವನ್ನು ಪಾಠ ಮಾಡುವಾಗ ಅಧ್ಯಾಪಕರು ವಾರ್ತೆಗಳನ್ನು ನೋಡಿ ಬಹಳ ಸ್ವಚ್ಹ ಉಚ್ಚಾರಣೆ ಮತ್ತೆ ಉತ್ಕೃಷ್ಟವಾದ ವ್ಯಾಕರಣ ಕಲಿಯಬಹುದು ಎಂದು ಹೇಳ್ಳುತ್ತಿದರು.

ಮೊನ್ನೆ ಯಾವುದೊ ಖಾಸಗಿ ಚಾನಲ್ ನ್ಯೂಸ್ ನೋದುತಿದ್ದೆ..
ಅಲ್ಲಿ ವರದಿಯಾಗುತ್ತಿದ ವಾರ್ತೆಗಳು ನನಗೆ ನಮ್ಮ ಅಧ್ಯಾಪಕರು ಹೇಳಿದ್ದ ಆ ಮಾತುಗಳು ಎಷ್ಟು ಹುಸಿಯಾಗಿವೆ ಇಂದು ಎನಿಸಿತು..

ಒಂದು ಉದಾಹರಣೆ ಕೊಡುತ್ತೇನೆ ( ಇದು ಯಾವುದೇ ನಿಜ ವ್ಯಕ್ತಿ/ ಘಟನೆಗೆ ಸಂಬಂದಿಸಿದಲ್ಲ )
ಬ್ರೇಕಿಂಗ್ ನ್ಯೂಸ್:: ಹಾರೋಹಳ್ಳಿ ತಾಂಡ , ಬಿಜಾಪುರ್ : ಒಂದು ಆಟೋ ರಿಕ್ಷಾ ಒಂದು ಸೈಕಲ್ ಸವಾರನಿಗೆ ಡಿಕ್ಕಿ ಹೊಡೆದ ಕಾರಣ ಅವನು ಗಟರಿನಲ್ಲಿ ಬಿದ್ದನು.. ಯಾವುದೇ ಆಸ್ತಿ ಪಾಸ್ತಿಗೆ ಹಾನಿಯಾಗದಿದ್ದರು .. ಗಟರಿನಲ್ಲಿ ಮಲಗಿದ್ದ ನಾಯಿಮರಿಯ ಒಂದು ಕಾಲು ಮುರಿದಿದೆ ..

ಮತ್ತಷ್ಟು ಬಿಸಿ ಸುದ್ದಿ ಬ್ರೇಕ್ ನ ನಂತರ
follow up
live call from harohalli

ಮಹೇಶ reporting: ಈಗ ಇಲ್ಲಿ ಸ್ಥಿತಿ ಚಿಂತಾಜನಕವಾಗಿದೆ . PeTA ಕಾರ್ಯಕರ್ತರು auto ಚಾಲಕರು ಮತ್ತೆ ಸೈಕಲ್ ಸವಾರರ ಮೇಲೆ ಹಲ್ಲೆ ನಡೆಸಿ ಒಂದು ಸೈಕಲ್ ಹಾಗು ಒಂದು ಆಟೋ tyre puncture ಮಾಡಿದ್ದರೆ . ಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಪೋಲೀಸರು Rs 500 ಲಂಚ ಕೆಳುತಿದ್ದರೆ .
ಇದ್ದರಿಂದ ಊರಿನ ಜನತೆಗೆ ಬಹಳ ನೋವು ಉಂಟಾಗಿ ನಾಳೆ ಹಾರೋಹಳ್ಳಿ ಬಂಧ ಘೋಷಿಸಿ , ರಾಜ್ಯಪಾಲರ ಮನೆ ಘೇರಾವ್ ಮಾಡಲಿದ್ದಾರೆ
over to ಸ್ಟುಡಿಯೋ...

(ಯಾವುದೇ ಖಾಸಗಿ ಅಥವ ಸರ್ಕಾರಿ ಸಂಘಟನೆಗೆ ನಾನು ದಕ್ಕೆ ತರುವ ಉದ್ದೇಶದಿಂದ ಇದನ್ನು ಬರೆದಿಲ್ಲ.. ದಯವಿಟ್ಟು ಹಾಸ್ಯಗಾರನ ಒಂದು ಪ್ರಾಮಾಣಿಕ ಪ್ರಯತ್ನ ಎಂದು ಹೊಟ್ಟೆಗೆ ಹಾಕೊಳ್ಳಿ ..

ಅಯ್ಯೋ ಇಲ್ಲ ಅಂದ್ರೆ ಬಿಡಿ ,, ನಂದೇನು ಹೋಗತ್ತೆ ಕತ್ತೆ ಬಾಲ? ನನ್ನ ಖುದ್ದಾಗಿ ಸಿಕ್ಕಾಗ ಒಂದೆರಡ್ ಮಾತು ಅಂದಿ ತೀರಸ್ಕೊಳ್ಳಿ ok ನಾ ? )

1 comment:

Patavardhan, Praveen said...

ಆದಿತ್ಯ,

ನೀವು ಭಾವಿಸಿದ್ದು ಸರಿಯೇ. ಇಂತಹ ಘಟನೆಗಳನ್ನು ಪ್ರಾಯಶಃ ಸ್ವಚ್ಛ ಕನ್ನಡ ಬಲ್ಲವರೆಲ್ಲರೂ ದೂಷಿಸುತ್ತಿದ್ದಾರೆ. ಸುಮಾರು ಹತ್ತು ವರ್ಷಗಳ ಹಿಂದೆ ಒಂದು ಲೇಖನ ಓದಿದ ನೆನಪಾಗುತ್ತದೆ. ಇಂಗ್ಲಾಂಡಿನಲ್ಲಿನ ಎನ್.ಜಿ.ಓ ಮಾಡಿದ ಸಂಶೋಧನೆ "ಈವರೆಗೂ ಆಂಗ್ಲ ಭಾಷೆಯಲ್ಲಿ ಎಷ್ಟೋ ತಪ್ಪುಗಳನ್ನೇ ಬಳಸಲಾಗುತ್ತಿದ್ದು, ಆ ತಪ್ಪುಗಳನ್ನೇ ವಾಡಿಕೆಯಾಗಿರಿಸಿಕೊಂಡಿರುವ ಭಾಷೆ, ಮುಂದೆಯೂ ಸಾಕಷ್ಟು ಬದಲಾವಣೆಗಳಾಗಿ ಆಂಗ್ಲ ಭಾಷೆಯೇ ಕಲಸುಮೇಲೋಗರವಾಗಬಹುದು......" ಎಂದು ಅಭಿಪ್ರಾಯಪಟ್ಟಿದ್ದರು. ಈ ಗೊಂದಲ ಎಲ್ಲಾ ಭಾಷೆಗೂ ಬಂದುಬಿಟ್ಟಿದೆ. ಕನ್ನಡಕ್ಕೂ ಬಂದಿರುವುದು ವಿಪರ್ಯಾಸ.

ಶುದ್ಧ ಕನ್ನಡ ಈಗ ಕಾಣಸಿಗುವುದು ಪುಸ್ತಕದಲ್ಲಿ ಮಾತ್ರ. ಆಡು ಭಾಷೆಯಲ್ಲಿ ಬದಲಾವಣೆಗೊಳ್ಳುತ್ತಿದೆ. ಇಂದು ಭಾಷೆಯಲ್ಲಿ ಆದ ತಪ್ಪುಗಳು ನಾಳೆಯಿಂದ ಶ್ರೋತೃಗಳ ಸರಸ್ವತಿ-ಅನುಗ್ರಹಿತ ನಾಲಗೆಯಲ್ಲಿ ರಾರಜಿಸುತ್ತವೆ. ನೀವು ಹೇಳಿದ ಹಾಗೆ ಕೇವಲ ದೂರದರ್ಶನದಲ್ಲಿ ಈ ಪ್ರಾಮಾದ ನಡೆಯುತ್ತಿಲ್ಲ, ಅದರ ನಿಕಟ ಪ್ರತಿಸ್ಪರ್ಧಿ ನಮ್ಮ ಖಾಸಗಿ ಎಫ಼್.ಎಮ್ ಗಳು.

ನಂದೇನು ಹೊಗತ್ತೆ ಕತ್ತೆ ಬಾಲ ಅಂಥ ಅಲಕ್ಷಿಸಿದರೆ..............ಮುಂದೆ ನಮ್ಮ ಮೊಮ್ಮೊಕ್ಕಳ ಕಾಲದಲ್ಲಿ ಕನ್ನಡ ಶೋಚನೀಯ, ಯೋಚನೀಯ...


ಇಂತಿ ನಿಮ್ಮವ,

ಪ್ರಕೊಪ
ಪ್ರವೀಣ್ ಪಟವರ್ಧನ್